   ಮೂಲದೊದನೆ ಪರಿಶೀಲಿಸಿ

ಐಸೊಪ್ರೀನ್ ನಿಯಮ: ಟರ್ಪೀನುಗಳ ಅಣುರಚನೆಯಲ್ಲಿ ಕಂಡುಬರುವ ಕಾರ್ಬನ್ ಪರಮಾಣುಗಳ ಚೌಕಟ್ಟುಗಳು ಐಸೊಪ್ರೀನ್ ಅಣುವಿನಲ್ಲಿರುವ ಕಾರ್ಬನ್ ಚೌಕಟ್ಟನೇ ರಚನಾಘಟಕವಾಗಿಟ್ಟುಕೊಂಡು ರೂಪಿತವಾಗಿವೆ-ಎಂಬುದೇ ಈ ನಿಯಮ. ಇವನ್ನು ಮೊಟ್ಟಮೊದಲಿಗೆ 1887ರಲ್ಲಿ ಗಾಟಿಂಗೆನ್ ವಿಶ್ವವಿದ್ಯಾನಿಲಯದ ಪ್ರೊ. ಆಟೊ ವಲಾಖ್ ಎಂಬಾತ ಪ್ರತಿಪಾದಿಸಿದ. ಮಾನೊ ಟರ್ಪೀನುಗಳ ಅಣುಗಳು (ಅ10) ಎರಡೆರಡು ಐಸೊಪ್ರೀನ್ ಅಣುಗಳಿಂದಲೂ ಸೆಸ್ಕ್ವಿಟರ್ಪೀನುಗಳು (ಅ15) ಮೂರು ಐಸೊಪ್ರೀನ್ ಅಣುಗಳಿಂದಲೂ ಡೈಟರ್ಪೀನುಗಳು (ಅ20) ನಾಲ್ಕು ಐಸೊಪ್ರೀನ್ ಅಣುಗಳಿಂದಲೂ ರೂಪಿತವಾಗಿವೆ. ಟರ್ಪೀನುಗಳಲ್ಲಿ ಕಾರ್ಬನ್ ಪರಮಾಣುಗಳ ಸಂಖ್ಯೆ ಮಾತ್ರವಲ್ಲ, ಅವುಗಳ ಜೋಡಣೆಯೂ ಐಸೊಪ್ರೀನ್ ರಚನೆಯನ್ನು ಆಧರಿಸಿವೆ. 
ಐಸೊಪ್ರೀನ್ ಅಣುವಿನಲ್ಲಿ ಕಾರ್ಬನ್ ಪರಮಾಣುಸರಣಿ ಶಾಖೆಯೊಡೆದಿರುವ ತುದಿಯನ್ನು ತಲೆ ಎಂದೂ ಇನ್ನೊಂದು ತುದಿಯನ್ನು ಬಾಲ ಎಂದೂ ಕರೆಯುವುದಾದರೆ ಸಾಮಾನ್ಯವಾಗಿ ಎಲ್ಲ ಟರ್ಪೀನುಗಳ ರಚನೆಯಲ್ಲಿಯೂ ಈ ಮೂಲ ಘಟಕಗಳು ತಲೆ-ಬಾಲ-ತಲೆ-ಬಾಲ ಈ ಕ್ರಮದಲ್ಲಿ ಸೇರಿಕೊಂಡಿರುವುದನ್ನು ಗಮನಿಸಬಹುದು. ಉದಾಹರಣೆಗೆ, 
ಈ ನಿಯಮಕ್ಕೆ ಹೊರತಾಗಿ ಕೆಲವು ಟರ್ಪೀನುಗಳಲ್ಲಿ ಮಾತ್ರ ಜೋಡಣೆ ಕ್ರಮ ತಲೆ-ಬಾಲ-ಬಾಲ-ತಲೆ ಇರುವುದು ಕಂಡುಬಂದಿದೆ. ಉದಾಹರಣೆಗೆ, ಆದರೆ ಇಂಥ ನಿದರ್ಶನಗಳು ವಿರಳ.
ಐಸೊಪ್ರೀನ್ ನಿಯಮದ ದೃಷ್ಟಿಯಿಂದ ಕ್ಯಾರೊಟೀನ್ ವರ್ಣದ್ರವ್ಯಗಳನ್ನು ಟೆಟ್ರಟರ್ಪೀನುಗಳೆಂದೂ (ಅ40) ರಬ್ಬರನ್ನು ಪಾಲಿಟರ್ಪೀನೆಂದೂ ಪರಿಗಣಿಸಬಹುದು. 
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ